ಸುರಕ್ಷತ ಸಲಹೆಗಳು

ಸಲಹೆಗಳು

ಕಾಡಿನೊಳಗೆ ಪ್ರವೇಶಿಸಿ ಆನಂದಿಸುವ ಮುನ್ನ ಸುರಕ್ಷತೆಯ ಅರಿವು ಮತ್ತು ಸಂಬಂಧಿತ ಮುನ್ನೆಚ್ಚರಿಕೆ ಕ್ರಮಗಳನ್ನು ಪರಿಗಣಿಸಬೇಕು. ಕ್ಯಾನೋಯಿಂಗ್, ಹೈಕಿಂಗ್ ಅಥವಾ ಈಜುವ ನಿರ್ಧಾರವನ್ನು ಇಡೀ ಗುಂಪು ತಮ್ಮ ಚಟುವಟಿಕೆಯ ಬಗ್ಗೆ ಚರ್ಚಿಸಿ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುವುದು ಬುದ್ದಿವಂತಿಕೆ ಮತ್ತು ಉಪಯುಕ್ತ. ಸ್ಥಳೀಯ ವನ್ಯಜೀವಿಗಳ ಅಭ್ಯಾಸಗಳ ಬಗ್ಗೆ ತಿಳಿದುಕೊಳ್ಳಿ, ಇದು ನಿಮ್ಮ ಮತ್ತು ನಿಮ್ಮ ಕುಟುಂಬವು ಸೂಕ್ತವಾದ ರೀತಿಯಲ್ಲಿ ಮತ್ತು ಎಚ್ಚರಿಕೆಯಿಂದ ನಿರ್ಧಾರ ಮಾಡಲು ಸಹಾಯ ಮಾಡುತ್ತದೆ.

ನಿಮ್ಮ ಕುಟುಂಬದ ಸುರಕ್ಷೆ, ನಿಮ್ಮ ಜವಾಬ್ದಾರಿ. ಸುರಕ್ಷತಾ ಜವಾಬ್ದಾರಿ ಒಪ್ಪಂದದ ನಿಯಮಗಳನ್ನು ಒಪ್ಪಿಕೊಂಡ ನಂತರ Limberlost ಸಂಬಂಧಿತ ಭೇಟಿ ಮತ್ತು ಮತ್ತು ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸುವುದು ಷರತ್ತುಬದ್ದವಾಗಿರುತ್ತದೆ. ಗಾಯ ಅಥವಾ ಅಪಘಾತದ ಸಂದರ್ಭದಲ್ಲಿ limberlost ಮತ್ತು ಅದರ ಸಹವರ್ತಿಗಳು ನಿರುಪದ್ರವಿಗಳಾಗಿರುತ್ತಾರೆ

Day Hikers

ನೀವು ಮುಂಚಿತವಾಗಿ ನಮ್ಮ ಸುರಕ್ಷತಾ ಜವಾಬ್ದಾರಿ ಒಪ್ಪಂದವನ್ನು ಭರ್ತಿ ಮಾಡಿದ್ದರು ಸಹ, ನಿಮ್ಮ ಪಾದಯಾತ್ರೆಯನ್ನು ಪ್ರಾರಂಭಿಸುವ ಮುನ್ನ, ಕಚೇರಿಯಲ್ಲಿ ನೋಂದಾಯಿಸಬೇಕು. ನಾವು Day Hikersನ್ನು ಮತ್ತು ವಸತಿ ಅತಿಥಿಗಳನ್ನು ಪ್ರೋತ್ಸಾಹಿಸುತ್ತೇವೆ. ನೀವು ನಮ್ಮ ಜಾಗದಲ್ಲಿರುವಾಗ, ನೀವು ಗಾಯಗೊಂಡರೆ ಅಥವಾ ಕಳೆದು ಹೋದರೆ ಅಥವಾ ಸಹಾಯದ ಅಗತ್ಯವಿದ್ದರೆ, ನೀವು ಎಲ್ಲಿ ಪಾದಯಾತ್ರೆ ಮಾಡುತ್ತಿದ್ದೀರಿ ಎಂದು ನಮಗೆ ತಿಳಿದಿರುವುದು ಅವಶ್ಯಕ ಮತ್ತು ಸೂಕ್ತ. ನೀವೆಲ್ಲಿದ್ದೀರಿ ಎಂದು ನಮಗೆ ತಿಳಿದಿಲ್ಲದಿದ್ದರೆ, ನಾವು ನಿಮಗೆ ಸಹಾಯ ಮಾಡಲು ಸಾಧ್ಯವಿಲ್ಲ. ನಿಮ್ಮ ಸ್ವಂತ ಸುರಕ್ಷತೆಯ ಬಗ್ಗೆ ಯೋಚಿಸಿ ಮತ್ತು ಹೊರಡುವ ಮುನ್ನ ದಯವಿಟ್ಟು ಕಚೇರಿಯಲ್ಲಿ ನಿಮ್ಮ ಮಾಹಿತಿ ದಾಖಲಿಸಿ.

ಸುರಕ್ಷತಾ ಆದ್ಯತೆಗಳು

ಪ್ರಾರಂಭದಲ್ಲಿ ಯಾತ್ರಿಕರನ್ನು ಕುದುರೆ ಸವಾರಿಯ ಮೂಲಕ ಕಾಡಿನಾದ್ಯಂತ ಮತ್ತು Algonquin parkಗೆ ಕರೆದೊಯ್ಯಲು Limberlost ಹಾದಿಯನ್ನು ವಿನ್ಯಾಸಗೊಳಿಸಲಾಗಿತ್ತು. ಕಾಲಾಂತರದಲ್ಲಿ ಅವುಗಳನ್ನು ಪಾದಯಾತ್ರಿಕರು ಬಳಸುತ್ತಿದ್ದರು ಮತ್ತು ಸುರಕ್ಷತೆಯು ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯಿತು. ಸುರಕ್ಷತೆಯೇ ಇಂದಿನ ಆದ್ಯತೆಯಾಗಿರುವುದರಿಂದ, ಇಲ್ಲಿಗೆ ಭೇಟಿ ನೀಡುವ ಎಲ್ಲರು ಇದೆ ಹಾದಿಯ ಮೂಲಕ ಓಡಾಡುವ ನಿರೀಕ್ಷೆಯಿದೆ,

Limberlost ಸಂರಕ್ಷಿತ ಪ್ರದೇಶಕ್ಕೆ ಬರುವ ಎಲ್ಲರಿಗೂ ಸುರಕ್ಷತಾ ಕ್ರಮಗಳ ಮಹತ್ವದ ಬಗ್ಗೆ ತಿಳಿಸಲಾಗುತ್ತದೆ. ಸುರಕ್ಷತಾ ಒಪ್ಪಂದವನ್ನು ಓದಿ, ಸಹಿ ಮಾಡಲು ಅವರಿಗೆ ತಿಳಿಸಲಾಗುತ್ತದೆ,ಹಾಗು ಎಲ್ಲಾ ಸಮಯದಲ್ಲೂ ಸುರಕ್ಷಾ ಪ್ರಜ್ಞೆಯನ್ನು ಜಾಗ್ರತಗೊಳಿಸಲು ಸೂಕ್ತ ತಿಳುವಳಿಕೆ ಮತ್ತು ಆದ್ಯತೆಯನ್ನು ಸೂಚಿಸುವ ನಿಟ್ಟಿನಲ್ಲಿ ಜವಾಬ್ದಾರಿಗಳನ್ನು ದಾಖಲಿಸಲಾಗುತ್ತದೆ.

ಕಾಡು ಪ್ರದೇಶದ ರಸ್ತೆಗಳಲ್ಲಿ ಪಾದಯಾತ್ರಿಗಳು ಮತ್ತು ವನ್ಯಜೀವಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ, ವಾಹನಗಳನ್ನು ಗುರುತುಪಡಿಸಿದ ಹಲವಾರು ಜಾಗಗಳಲ್ಲಿ, ಒಂದು ಕಡೆ ನಿಲ್ಲಿಸಲು ಸೂಚಿಸಲಾಗುತ್ತದೆ. ಇವುಗಳಲ್ಲಿ ಪ್ರತಿಯೊಂದು ಸ್ಥಳವು ಪ್ರಮುಖ ಪಾದಯಾತ್ರೆ ಸ್ಥಳಗಳ ಸಮೀಪದಲ್ಲಿವೆ. Master Trail Guideನ ಪ್ರತಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳುವುದನ್ನು ಮರೆಯಬೇಡಿ.

ಹೆಚ್ಚಿನ ಮಟ್ಟಿಗೆ, ಪ್ರಮುಖ ಹಾದಿಯನ್ನು ಇತರ ದಾರಿಗಳೊಂದಿಗೆ ಅಥವಾ ಕಾಡು ಪ್ರದೇಶದ ಸಣ್ಣ ನಡಿಗೆಗಳಿಂದ ಸಂಪರ್ಕ ಕಲ್ಪಿಸಲಾಗಿದೆ. ಆದ್ದರಿಂದ ಯಾತ್ರಿಕರು ತಮ್ಮ ಪಾದಯಾತ್ರೆಯನ್ನು ವಿಸ್ತರಿಸಲು ಸಾಧ್ಯವಾಗುತ್ತದೆ, ಅವರು ಜಾಡು ಮತ್ತು ಕಾಡು ಪ್ರದೇಶದ ಮೂಲಕ ಸುರಕ್ಷಿತವಾಗಿ ಆರಂಭಿಕ ಹಂತಕ್ಕೆ ಮರಳಬಹುದು ಎಂಬ ಭರವಸೆ ನೀಡುತ್ತದೆ.

ಯಾತ್ರಿಕರನ್ನು ಪತ್ತೆ ಹಚ್ಚಲು ಸಹಾಯವಾಗುವಂತೆ ಪ್ರತಿಯೊಂದು ಮುಖ್ಯ ಸ್ಥಳಗಲ್ಲಿ ಅಳವಡಿಸಲಾಗಿರುವ GPS reading ಬಗ್ಗು Limberlost master guideನಲ್ಲಿ ತಿಳಿಸಲಾಗಿದೆ. ಯಾತ್ರಿಗಳು ತಮ್ಮ ನಿಗದಿತ ಚಾರಣದ ಹಾದಿಯನ್ನು ಬದಲಿಸಿದರು, ಅದನ್ನು ನಾವು ಪ್ರೋತ್ಸಾಹಿಸದಿದ್ದರು, ಇದರ ಮೂಲಕ, ಅವರು ಸುರಕ್ಷಿತವಾಗಿ ಮರಳಲು ಸಹಾಯ ಮಾಡುತ್ತದೆ.

ಕಪ್ಪು ಕರಡಿ ಅಥವ ಇತರ ದೊಡ್ಡ ಪ್ರಾಣಿಗಳೊಂದಿಗೆ ಮುಖಾಮುಖಿಗಳನ್ನು ಕಡಿಮೆ ಮಾಡಲು ಅಥವಾ ಗಾಯಗಳನ್ನು ತಪ್ಪಿಸಲು, ಈ ಹಾದಿಯಲ್ಲಿರುವ ಮರಗಳನ್ನು ಹತ್ತು ಅಡಿ ಅಥವಾ ಅದಕ್ಕಿಂತ ಎತ್ತರಕ್ಕೆ ಬೆಳೆಸಲಾಗಿದೆ.

ಸುರಕ್ಷಿತ ಮತ್ತು ಪರಿಣಾಮಕಾರಿ ಮಾರ್ಗವನ್ನು ಸೂಚಿಸುವ ಮೂಲಕ, ಯಾತ್ರಿಕರು ಕಳೆದು ಹೋಗದಂತೆ ನೋಡಿಕೊಳ್ಳುತ್ತೇವೆ. ಈ ಚಾರಣದಲ್ಲಿ ವ್ಯಕ್ತಿಗಳನ್ನು ಗಾಯಗೊಳಿಸಬಹುದಾದ ಅಥವಾ ಅವರ ನಡಿಗೆಯಿಂದ ಸಸ್ಯಗಳ ಬೆಳವಣಿಗೆಯು ಕುಂಠಿತವಾಗದಂತೆ ಮತ್ತು ಸಣ್ಣ ಪ್ರಾಣಿಗಳು ಆಶ್ರಯಕ್ಕೆ ಬಳಸುವ ಟೊಳ್ಳಾದ ಪ್ರದೇಶವನ್ನು ಸಹ ಸೂಚಿಸುವುದಿಲ್ಲ.

ಸುರಕ್ಷತಾ ಕಾರಣಗಳಿಗಾಗಿ, ಪಶ್ಚಿಮ ಮತ್ತು ದಕ್ಷಿಣ ಗಡಿಯ ರಸ್ತೆಗಳ ಮೇಲೆ ನಾವು ಸಂಪೂರ್ಣ ನಿಯಂತ್ರಣ ಸ್ಥಾಪಿಸದ ಹೊರತು, ಯಾತ್ರಿಕರ ಚಾರಣವನ್ನು ಈಶಾನ್ಯ ಮತ್ತು ಕೇಂದ್ರ ಭಾಗಗಳಿಗೆ ಮೀಸಲಾಗಿಸಿ, ಸೀಮಿತವಾಗಿಡಲು ಸೂಚಿಸುತ್ತೇವೆ.