ಮಕ್ಕಳಿಗಾಗಿ

ಜೀವನದಲ್ಲಿ ಅತಿ ಮುಖ್ಯ ಅಂಶವೆಂದರೆ ಮಕ್ಕಳ ಹಂತ. ಅಜೀವ ಕಲಿಕೆ ಈ ಹಂತದಿಂದ ಪ್ರಾರಂಭವಾಗುತ್ತದೆ. ಇಡೀ ಜೀವನ ಕಲಿಕೆ ಕೂಡ ಈ ಹಂತವನ್ನು ಅವಲಂಭಿಸಿರುತ್ತದೆ. ಜಾತಿಗಳು ಮತ್ತು ಆವಾಸಸ್ಥಾನಗಳನ್ನ್ನು ಸಂರಕ್ಷಿಸುವ ವಾದಕ್ಕೆ ವಿದ್ಯಾರ್ಥಿ ಎಷ್ಟರ ಮಟ್ಟಿಗೆ ಬದ್ಧನಾಗಿರುತ್ತಾನೆ ಎಂಬುದರ ಮೇಲೆ ಸಂರಕ್ಷಣೆಯ ಬಗೆಗಿನ ಶಿಕ್ಷಣವು ಬಲವಾದ ಪ್ರಭಾವ ಬೀರುತ್ತದೆ. (Tim Caro ೨೦೦೩) ಹೇಳುವಂತೆ, ಶೈಕ್ಷಣಿಕ ಕಾರ್ಯಕ್ರಮದ ಯಶಸ್ವಿ ಅನುಷ್ಠಾನವನ್ನು ಅವಲಂಬಿಸಿರುತ್ತದೆ.

ಶೈಕ್ಷಣಿಕ ಪ್ರವಾಸೋದ್ಯಾಮ ಈ ರೀತಿಯ ಶಿಕ್ಷಣ ವ್ಯವಸ್ಥೆಯನ್ನು ಖಾತ್ರಿಗೊಳಿಸುತ್ತದೆ. ಆದ್ದರಿಂದ ಮಕ್ಕಳ ಮಟ್ಟದಲ್ಲಿ, ಶೈಕ್ಷಣಿಕ ಪ್ರವಾಸೋದ್ಯಮದಿಂದ ಅರಣ್ಯ ಸಂರಕ್ಷಣೆಗೆ ಸಂಭಂದಿಸಿದ ಜಾಗೃತಿ ಮತ್ತು ಶಿಕ್ಷಣವನ್ನು ಯಶಸ್ವಿಯಾಗಿ ಜಾರಿಗೆ ತರಲಾಗಿದೆ

  • ಅರಣ್ಯ ಪ್ರದೇಶದ ಬಗ್ಗೆ ಪರಿಸರ ಜಾಗೃತಿ, ಶಿಕ್ಷಣ ಯೋಜನೆಯ ಅನುಷ್ಠಾನಕ್ಕೆ ಆಧಾರವಾಗಲಿದೆ.
  • ಅರಣ್ಯ ಆಧಾರಿತ ಶೈಕ್ಷಣಿಕ ಪ್ರವಾಸೋದ್ಯಮದ ಮೂಲಕ ಮಕ್ಕಳಿಗೆ ಮಾಹಿತಿ ಮತ್ತು ಮನರಂಜನೆ ನೀಡಲಾಗುವುದು ಮತ್ತು ಅರಣ್ಯ ಸಂಪನ್ಮೂಲಗಳ ಪರಿಚಯ ಮಾಡಿಸುವ ಮೂಲಕ ಅವರ ಕಲಿಕೆಯನ್ನು ಖಚಿತಪಡಿಸಿಕೊಳ್ಳುವುದು.
  • ಅರಣ್ಯ ಪರಿಸರ, ವಿಜ್ಞಾನದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುವುದು, ಸಸ್ಯ ಮತ್ತು ಪ್ರಾಣಿಗಳಿಗೆ ಸಂಬಂಧಿಸಿದ ವಿಚಾರಗಳು ಮತ್ತು ವಿಶೇಷವಾಗಿ ಸ್ಥಳೀಯ ಮತ್ತು ಅಳಿವಿನಂಚಿನಲ್ಲಿರುವ ಪ್ರಭೇದಗಳ ಬಗ್ಗೆ ಮಕ್ಕಳಿಗೆ ಸಂಪೂರ್ಣ ಮಾಹಿತಿ ನೀಡುವುದು.
  • ಸಂರಕ್ಷಣೆಯ ಬಗ್ಗೆ ತಿಳಿಸುವುದರಿಂದ, ವಿದ್ಯಾರ್ಥಿಗಳಿಗೆ ಪರಿಸರದ ಅರಿವಿನ ಬಗ್ಗೆ ಹೆಚ್ಚು ಸಹಾನುಭೂತಿ ಉಂಟಾಗುತ್ತದೆ.
  • ರಾಷ್ಟ್ರ ಮತ್ತು ಉತ್ತಮ ನಾಗರೀಕರ ಅಭಿವೃದ್ಧಿಯನ್ನು ಉತ್ತೇಜಿಸುವುದು.
  • ಸಮುದಾಯದಲ್ಲಿ ಪರಿಸರ ಸಮಸ್ಯೆಯನ್ನು ಗುರುತಿಸುವ ಮಕ್ಕಳನ್ನು ಗುರುತಿಸಿ ಮತ್ತು ಅವರನ್ನು ರಾಷ್ಟ್ರ ಮಟ್ಟದ ಚರ್ಚೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿ, ಅವರಿಂದ ಕಲಿಯುವುದು ಮತ್ತು ತೊಡಗಿಸಿಕೊಳ್ಳುವುದು.
  • ಪರಿಸರ ಕಾಳಜಿಯನ್ನು ಚರ್ಚಿಸಲು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪರಿಸರ ಶಾಸನವನ್ನು ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ.