ನಾಗರಹೊಳೆಯನ್ನು ಅನ್ವೇಷಿಸಿ
Image of Iruppu Falls
ಇರ್ಪು ಜಲಪಾತ
ಇರ್ಪು ಜಲಪಾತವು ಕರ್ನಾಟಕದ ಕೊಡಗು ಜಿಲ್ಲೆಯ ಬ್ರಹ್ಮಗಿರಿ ಬೆಟ್ಟ ಶ್ರೇಣಿಯಲ್ಲಿದ್ದು, ಕೇರಳದ ವೈನಾಡು ಜಿಲ್ಲೆಯೊಂದಿಗೆ ಗಡಿರೇಖೆ ಹೊಂದಿದೆ. ಇದೊಂದು ಶುದ್ಧ ನೀರಿನ ಕಿರು ಜಲಪಾತವಾಗಿದ್ದು, ವಿರಾಜಪೇಟೆಯಿಂದ ನಾಗರಹೊಳೆ ಹೆದ್ದಾರಿಯಲ್ಲಿ 48 ಕಿ.ಮೀ ದೂರದಲ್ಲಿದೆ.
ದೂರ : 16 ಕಿ.ಮೀ
Mruthyunjaya Swami Temple
ಶ್ರೀ ಮೃತ್ಯುಂಜಯ ಸ್ವಾಮಿ ದೇವಾಲಯ
ವಿರಾಜಪೇಟೆ ತಾಲ್ಲೂಕಿನ ಬಡಿಗೇರಕೇರಿಯೆಂಬ ಚಿಕ್ಕ ಗ್ರಾಮದಲ್ಲಿ ಶ್ರೀ ಮೃತ್ಯುಂಜಯ ಸ್ವಾಮಿ ದೇವಾಲಯವಿದೆ.
ದೂರ : 18 ಕಿ.ಮೀ
Thiruneli Vishnu Temple
ತಿರುನೆಲ್ಲಿ ಮಹಾವಿಷ್ಣು ದೇವಾಲಯ
ಶ್ರೀ ಮಹಾವಿಷ್ಣುವಿನ ಪ್ರಾಚೀನ ಕಾಲದ ತಿರುನೆಲ್ಲಿ ದೇವಾಲಯವು ಕೇರಳದ ಬ್ರಹ್ಮಗಿರಿ ಬೆಟ್ಟ ಶ್ರೇಣಿಯ ಪಕ್ಕದಲ್ಲಿದ್ದು, ಕರ್ನಾಟಕದ ಗಡಿರೇಖೆಗೆ ಹತ್ತಿರದಲ್ಲಿದೆ.
ದೂರ : 26 ಕಿ.ಮೀ
Tea Estate Landscape
ಟೀ ಎಸ್ಟೇಟ್
ಪರ್ವತಗಳ ತಾಜಾ ಗಾಳಿ ಹಾಗೂ ಶ್ರೀಮಂತ ಹಸಿರು ರಾಶಿಯ ನಡುವೆ ಸರಿಸುಮಾರು 1200 ಎಕರೆ ಪ್ರದೇಶದಲ್ಲಿ ಹರಡಿರುವ ಟೀ ತೋಟದಲ್ಲಿ ಅನಿಯಮಿತ ಕಾಲ ನೀರವ ಕಾಲ್ನಡಿಗೆಯಲ್ಲಿ ತೆರಳುವಾಗ ಮಲೆ ಸೀಟಿ ಸಿಳ್ಳಾರ, ಮಲೆ ಮಂಗಟ್ಟೆ ಪಕ್ಷಿಗಳ ನಿನಾದ ಕೇಳುತ್ತದೆ.
ದೂರ : 14 ಕಿ.ಮೀ
Wayanad Wildlife Sanctuary Tholpetty Safari Point
ವೈನಾಡು ವನ್ಯಜೀವಿಧಾಮ
ವೈನಾಡು ವನ್ಯಧಾಮವು ಸಮೃದ್ಧ ಹಸಿರು ರಾಶಿ ಹಾಗೂ ವನ್ಯಜೀವಿಗಳಿಂದ ಕೂಡಿದೆ. ಈ ವನ್ಯಧಾಮವು ಹಲವಾರು ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಸಸ್ಯ ಹಾಗೂ ಪ್ರಾಣಿ ಪ್ರಭೇದಗಳಿಗೆ ಆಶ್ರಯ ತಾಣವಾಗಿದೆ.
ದೂರ : 15 ಕಿ.ಮೀ
Kabini Dam
ಕಬಿನಿ ಅಣೆಕಟ್ಟು
ಕಬಿನಿ ಅಣೆಕಟ್ಟನ್ನು ಮೈಸೂರು ಜಿಲ್ಲೆಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಈ ಅಣೆಕಟ್ಟು 696 ಮೀ ಉದ್ದವಾಗಿದ್ದು 1974ರಲ್ಲಿ ಕಟ್ಟಲಾಗಿದೆ. 55 ಎಕರೆ ವಿಶಾಲವಾದ ಜಲಾನಯನ ಪ್ರದೇಶ ಹೊಂದಿರುವ ಕಬಿನಿ ಅಣೆಕಟ್ಟು ಕಾಡು, ನದಿ, ಕೆರೆ ಮತ್ತು ಗಿರಿಶ್ರೇಣಿಗಳನ್ನು ಆವರಿಸಿಕೊಂಡಿದೆ.
ದೂರ : 15 ಕಿ.ಮೀ
Chikkadevammana Betta
ಚಿಕ್ಕದೇವಮ್ಮನ ಬೆಟ್ಟ
ಪವಿತ್ರವಾದ ಚಿಕ್ಕದೇವಮ್ಮ ಬೆಟ್ಟವು ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯ ಕುಂದೂರು ಗ್ರಾಮದಲ್ಲಿದೆ. ಬೆಟ್ಟದ ತಪ್ಪಲಿನಲ್ಲಿ ಚಿಕ್ಕದೇವಮ್ಮನ ದೇವಾಲಯವಿದೆ. ಈ ಬೆಟ್ಟವು ಕಾಡಿನಿಂದ ಸುತ್ತುವರಿದಿರುವುದರಿಂದ ಆನೆ, ಚಿರತೆ, ಜಿಂಕೆ ಮತ್ತು ಹಲವಾರು ಕಾಡು ಪ್ರಾಣಿಗಳು ಕಾಣಸಿಗುತ್ತವೆ
ದೂರ : 35 ಕಿ.ಮೀ