2 ರಿಂದ 8 ಅಕ್ಟೋಬರ್

66th Wildlife Week

1 ಅಕ್ಟೋಬರ್ 2020: ಅಕ್ಟೋಬರ್ 2020: 66ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ವೀರನಹೊಸಹಳ್ಳಿ ವಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವನ್ಯಜೀವಿ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಪೋಸ್ಟರ್ ಗಳನ್ನು ಬಿಡುಗಡೆ ಮಾಡಲಾಯಿತು. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

2 ಮತ್ತು 8 ಅಕ್ಟೋಬರ್ 2020: 66ನೇ ವನ್ಯಜೀವಿ ಸಪ್ತಾಹದ ಅಂಗವಾಗಿ, ಬೆಂಗಳೂರಿನ ಸುರಾನ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕಾರ್ತಿಕ ಕೃಷ್ಣನ್ ರವರು ಶಾಲಾ ಮಕ್ಕಳಿಗೆ ವನ್ಯಜೀವಿ ಸಂರಕ್ಷಣೆಯ ಮಹತ್ವದ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಈ ವರ್ಷದ ವಿಷಯ ರಣಹದ್ದುಗಳನ್ನು ಆಧರಿಸಿದ ಕಾರಣ, ಪರಿಸರ ವ್ಯವಸ್ಥೆಯನ್ನು ಕಾಪಾಡುವಲ್ಲಿ ರಣಹದ್ದುಗಳ ಪಾತ್ರವನ್ನು ವಿವರಿಸಲಾಯಿತು.ಈ ಕಾರ್ಯಕ್ರಮವನ್ನು WWW INDIA, JNCASR ಮತ್ತುSurana College ನ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಗಡಿ ಅಂಚಿನಲ್ಲಿರುವ ಹಳ್ಳಿಗಳ ವಿದ್ಯಾರ್ಥಿಗಳನ್ನು ಸಣ್ಣ ಪ್ರಮಾಣದಲ್ಲಿ (ದಿನಕ್ಕೆ 25) ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವ ಮೂಲಕ ಪರಿಸರ ವ್ಯವಸ್ಥೆಯನ್ನು ಕಾಪಾಡುವಲ್ಲಿ ರಣಹದ್ದುಗಳ ಪಾತ್ರದ ಬಗ್ಗೆ ಜಾಗೃತಿ ಮೂಡಿಸಲಾಯಿತು.ನಂತರ ರಸಪ್ರಶ್ನೆ ಸ್ಪರ್ಧೆ, ಮೂಕಪಾತ್ರಾಭಿನಯ ಇತರೆ ಚಟುವಟಿಕೆಗಳನ್ನು ನಡೆಸಲಾಯಿತು.ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆಯನ್ನು ಅಂತರಸಂತೆ ವನ್ಯಜೀವಿ ವಲಯದಲ್ಲಿ ಆಯೋಜಿಸಲಾಗಿತ್ತು.

ಪಾಲ್ಗೊಂಡ ಹಳ್ಳಿಗಳು – ಹುಣಸೇಕುಪ್ಪೆ, ಹೊಸಮಾಳ, ಹೊಸಹೊಳಲು ಮತ್ತು ಮಳಲಿ.

ಪಾಲ್ಗೊಂಡ ವಿದ್ಯಾರ್ಥಿಗಳ ಸಂಖ್ಯೆ : 125 (5ನೇ ತರಗತಿಯಿಂದ 9ನೇ ತರಗತಿಯವರೆಗೂ)

3 ಅಕ್ಟೋಬರ್ 2020:ವನ್ಯಜೀವಿ ಸಪ್ತಾಹದ ಅಂಗವಾಗಿ ವನ್ಯಜೀವಿ ಸಪ್ತಾಹದ ಧ್ಯೇಯವನ್ನು ಮತ್ತು ಉದ್ದೇಶವನ್ನು ಆಕಾಶವಾಣಿಯಲ್ಲಿ ಭಿತ್ತರಿಸಲಾಯಿತು. ಖ್ಯಾತನಾಮರಾದಂತಹ ಕೃಪಾಕರವರು, ವನ್ಯಜೀವಿ ಕಿರುಚಿತ್ರ ತಯಾರಕರು, ಸಂರಕ್ಷಣಾ ತಜ್ಞರು ಮತ್ತು ಅರಣ್ಯ ಅಧಿಕಾರಿಗಳು ವನ್ಯಜೀವಿ ಸಂರಕ್ಷಣೆಯ ಅಗತ್ಯತೆಯನ್ನು ತಿಳಿಸಿದರು.

5 ಮತ್ತು 6 ಅಕ್ಟೋಬರ್ 2020: 66ನೇ ವನ್ಯ ಜೀವಿ ಸಪ್ತಾಹದ ಪ್ರಯುಕ್ತ ಅರಣ್ಯ ಇಲಾಖೆಯು ಸ್ವಚ್ಛ ಅರಣ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ ಉದ್ಬೂರು ಗೇಟಿನಿಂದ ಬಾವಲಿಗೇಟ್,ಮೈಸೂರು-ತಲಚೇರಿ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು.

2 ಮತ್ತು 8 ಅಕ್ಟೋಬರ್ 2020:ಆನೆ ಕಾರಿಡಾರ್ ಮತ್ತು ರಣ ಹದ್ದುಗಳನ್ನು ಸಂರಕ್ಷಿಸುವ ಎರಡು ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯ ಮಟ್ಟದ ಸೈಕಲ್‌ ಜಾಥಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

7 ಅಕ್ಟೋಬರ್ 2020 : ವೀರನಹೊಸಹಳ್ಳಿಯಲ್ಲಿ ಇಡಿಸಿ ಸದಸ್ಯರೊಂದಿಗೆ ಪುನರುಜ್ಜೀವನ ಸಭೆ ಮತ್ತುಇಡಿಸಿ ಸದಸ್ಯರಿಗೆ ಉಚಿತ ಸಫಾರಿ ಅವಕಾಶ ಕಲ್ಪಿಸಲಾಗಿತ್ತು.

8 ಅಕ್ಟೋಬರ್ 2020: 66ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ವನ್ಯಜೀವಿ ರಸಪ್ರಶ್ನೆ, ಛಾಯಾಚಿತ್ರ ಮತ್ತು ಘೋಷಣಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.

66ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ವನ್ಯಜೀವಿ ರಸಪ್ರಶ್ನೆ, ಛಾಯಾಚಿತ್ರ ಮತ್ತು ಘೋಷಣಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು, ಸ್ಪರ್ಧೆಯ ವಿಜೇತರಿಗೆ ಪ್ರಮಾಣ ಪತ್ರ ಮತ್ತು ಬಹುಮಾನಗಳನ್ನು ವಿತರಿಸಲಾಯಿತು.

66ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಘೋಷಣಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು

ಘೋಷಣಾ ಸ್ಪರ್ಧೆಯಲ್ಲಿಒಟ್ಟು 20 ಸ್ಪರ್ಧಿಗಳು ಭಾಗವಹಿಸಿದ್ದು,

ಅವುಗಳಲ್ಲಿ ಈ ಕೆಳಗಿನ ಘೋಷವಾಕ್ಯಗಳನ್ನು ವಿಜೇತ ಘೋಷವಾಕ್ಯವೆಂದು ತೀರ್ಪುಗಾರರು ಆಯ್ಕೆಮಾಡಿರುತ್ತಾರೆ.

CATEGORIES: Vultures for Future
Winner  : ಹದ್ದೇಕೆ ಅನ್ನದಿರಿ, ಹದ್ದು ಮೀರದಿರಿ, ಹದ್ದೇ ವನಸಿರಿ. 
1st Runner Up: Conserve Vulture’ for its Cleaning Culture, to have ‘Healthy’ Nature.
2nd Runner Up : ರಣ ಹದ್ದುಗಳ ಅವಸಾನ,  ಕ್ರಿಮಿ   ಕೀಟಗಳ ಜನನ, ನಮ್ಮ ಜೀವನ ಕಠಿಣ

CATEGORIES: Wildlife Awareness 
Winner  : ವನ್ಯ ಜೀವಿಗಳಿದ್ದರೆ ಮನುಕುಲದ ಬಾಳು ಇಲ್ಲದಿದ್ದರೆ ವಿನಾಶದ ಗೋಳು
1st Runner Up: Don’t let them just be in pictures, raise your voice for the ones without voice.

CATEGORIES: Nagarahole Tiger Reserve
Winner  : ನಮ್ಮ ನಾಗರಹೊಳೆ, ಭವ್ಯ ಹುಲಿ ಘರ್ಜನೆಯ ನೆಲೆ
1st  Runner Up: POUR MORE LOVE ON THE ROAR

66ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಛಾಯಾಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಛಾಯಾಚಿತ್ರ ಸ್ಪರ್ಧೆಯಲ್ಲಿಒಟ್ಟು 87 ಸ್ಪರ್ಧಿಗಳು ಭಾಗವಹಿಸಿರುತ್ತಾರೆ.

ಸ್ವೀಕರಿಸಲಾದ ಛಾಯಾಚಿತ್ರಗಳ ಸಂಖ್ಯೆ: 387

ಬಹುಮಾನ ಗೆದ್ದ ಕೆಲವು ಛಾಯಾಚಿತ್ರಗಳು

66ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಒಟ್ಟು ನೋಂದಾಯಿತ ಸ್ಪರ್ಧಿಗಳು : 62

ಭಾಗವಹಿಸಿದವರು: 40

2 ಮತ್ತು 8 ಅಕ್ಟೋಬರ್ 2020: ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳು, ಅರಣ್ಯ ಸಚಿವರು, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಅರಣ್ಯ ಪಡೆ ಮುಖ್ಯಸ್ಥರು ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಂಚಿನ ಹಳ್ಳಿಗಳು ಹಾಗೂ ಬುಡಕಟ್ಟು ಜನರಿಗೆ ವನ್ಯಜೀವಿ ಸಂರಕ್ಷಣೆಯ ಬಗ್ಗೆ ಮತ್ತು ಅದರ ವೈವಿಧ್ಯತೆಯ ಬಗ್ಗೆ ನೀಡಿದ ಜಾಗೃತಿ ಸಂದೇಶವನ್ನು ಎಲ್.ಇ.ಡಿ. ಮೂಲಕ ಪ್ರದರ್ಶಿಸಲಾಯಿತು.