---

ಇತ್ತೀಚಿನ ಸುದ್ದಿಗಳು

10 ಜುಲೈ 2021: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಡಿ.ಬಿ.ಕುಪ್ಪೆ ವನ್ಯಜೀವಿ ವಲಯದಲ್ಲಿ ಬೆಂಗಳೂರಿನ ಶ್ರೀ ರೆನ್ನಿ ಸಾಮ್ಯುಯಲ್ ,ವಿಪಿ ಹೆಚ್.ಆರ್ ಮೆಡ್ರಿಕ್ ಲಿ. ಹಾಗೂ ಶ್ರೀ ಸಂತೋಷ್ ನಾರಾಯಣ್, ವಕೀಲರು ಇವರು ಸೋಲಾರ್ ವಿದ್ಯುತ್ ದೀಪ, ಮೊಬೈಲ್ ಚಾರ್ಜಿಂಗ್ ಸಿಸ್ಟಮ್ ಹಾಗೂ ಚಿತ್ರ ಕಲಾ ಸಾಮಾಗ್ರಿಗಳನ್ನು ಬುಡಕಟ್ಟು ಗಿರಿಜನರಿಗೆ ಹಾಗೂ ಡಿ.ಬಿ.ಕುಪ್ಪೆ ವನ್ಯಜೀವಿ ವಲಯದ ಮುಂಚೂಣಿ ಸಿಬ್ಬಂದಿಗಳಿಗೆ ಕೊಡುಗೆಯಾಗಿ ನೀಡಿರುತ್ತಾರೆ.

4 ಜುಲೈ 2021: ಮಾಸ್ತಿಗುಡಿ ಬುಡಕಟ್ಟು ಪುನರ್ವಸತಿ ಕೇಂದ್ರದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಪುನರ್ವಸತಿಗೊಂಡ ಗಿರಿಜನರ ಮುಖಂಡರೊಂದಿಗೆ ಸಭೆ ನಡೆಸಲಾಯಿತು.

1 ಜುಲೈ 2021: ಸಿಎಸ್ಆರ್ ಉಪಕ್ರಮಗಳು
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಮಹೇಂದ್ರ ಥಾರ್ ವಾಹನವನ್ನು ಆಭರಣ್ ಫೌಂಡೇಶನ್ ರವರು ಕೊಡುಗೆಯಾಗಿ ನೀಡಿರುತ್ತಾರೆ.

20 ಜೂನ್ 2021: ಸ್ವಚ್ಛ ಕಬಿನಿ
ವಿಶ್ವ ಪರಿಸರ ದಿನದ ಪ್ರಯುಕ್ತವಾಗಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಸಿಬ್ಬಂದಿಗಳು, ನಮ್ಮ ಮೈಸೂರು ಫೌಂಡೇಶನ್ ಹಾಗೂ ಕಬಿನಿ ಪ್ರದೇಶದ ಸುತ್ತಮುತ್ತಲಿನ ರೆಸಾರ್ಟ್ಸ್ ಗಳ ಸಹಯೋಗದೊಂದಿಗೆ ಸ್ವಚ್ಛ ಕಬಿನಿ ಕಾರ್ಯಕ್ರಮ ಹಮ್ಮಿಕೊಂಡು ಕಬಿನಿ ನದಿಯ ದಡದಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ತೆಗೆದು ಸ್ವಚ್ಛಗೊಳಿಸಲಾಯಿತು.

9 ಜೂನ್ 2021: Eco Volunteers India ಮತ್ತು ಅಗರ್ ವಾಲ್ ಆಸ್ಪತ್ರೆಗಳ ಸಹಯೋಗದೊಂದಿಗೆ ನಾಗರಹೊಳೆಯ ಸಿಬ್ಬಂದಿಗಳಿಗೆ ಉಚಿತ ವೈದ್ಯಕೀಯ ತಪಾಸಣೆ ಶಿಬಿರವನ್ನು ವೀರನಹೊಸಹಳ್ಳಿ ಹಾಗೂ ಹ್ಯಾಂಡ್ ಪೋಸ್ಟ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿರುತ್ತದೆ.

7 ಜೂನ್ 2021: ಬೆಂಗಳೂರಿನ ಯುನೈಟೆಡ್ ವೇ ರವರ ಸಹಯೋಗದೊಂದಿಗೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಹುಣಸೂರು, ತಿತಿಮತಿ ಹಾಗೂ ಹ್ಯಾಂಡ್ ಪೋಸ್ಟ್ ಆವರಣಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಹಾಗೂ ಕುಟುಂಬ ಸದಸ್ಯರಿಗೆ ಕೋವಿಡ್-19 ಲಸಿಕೆ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

5 ಜೂನ್ 2021: ವಿಶ್ವ ಪರಿಸರ ದಿನ
ವಿಶ್ವ ಪರಿಸರ ದಿನದ ಪ್ರಯುಕ್ತ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವೆಬಿನಾರ್ ಅನ್ನು ಆಯೋಜಿಸಲಾಗಿದ್ದು, ಪ್ರಮುಖವಾಗಿ ಕೈಗೊಂಡ ಚಟುವಟಿಕೆಗಳು,
1) ನಾಗರಹೊಳೆಯ ಬಗ್ಗೆ ಕಿರು ಚಿತ್ರಣ,
2) ನಾಗರಹೊಳೆಯ ಹಡ್ಲುಗಳ ಬಗ್ಗೆ ಕಿರು ಚಿತ್ರಣ,
3) ಹುಲ್ಲುಗಾವಲು ನಿರ್ವಹಣೆ ಬಗ್ಗೆ ಮಾಹಿತಿ,
4) ಚಿತ್ರಕಲೆ & ಪೋಸ್ಟರ್ ಸ್ಪರ್ಧೆಯ ವಿಜೇತರ ಪ್ರಕಟಣೆ

3 ಮಾರ್ಚ್ 2021: ವಿಶ್ವ ವನ್ಯಜೀವಿ ದಿನ
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಿಶ್ವ ವನ್ಯಜೀವಿ ದಿನದ ಆಚರಣೆಯ ಅಂಗವಾಗಿ ಅರಣ್ಯ ಸಂರಕ್ಷಣೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿಗಳಿಗೆ ದಿವಂಗತ ಶ್ರೀ ಮಣಿಕಂದನ್ ರವರ ಸ್ಮರಣಾರ್ಥ ಪ್ರಶಸ್ತಿಯನ್ನು ವಿತರಿಸಲಾಯಿತು.

2 ಫೆಬ್ರವರಿ 2021: ವಿಶ್ವ ಜೌಗು ದಿನ
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಬಿನಿ ಹಾಗೂ ತಾರಕ ಹಿನ್ನೀರಿನ ಭಾಗ ಪ್ರಮುಖ ಜಲ ಪ್ರದೇಶಗಳಾಗಿದ್ದು, ವಲಸೆ ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ. ವಿಶ್ವ ಜೌಗು ದಿನದ ಅಂಗವಾಗಿ ಸ್ಥಳೀಯ ರೆಸಾರ್ಟ್ಸ್ ಗಳ ಸಹಯೋಗದೊಂದಿಗೆ ಕಬಿನಿ ಹಾಗೂ ತಾರಕ ಹಿನ್ನೀರಿನ ಭಾಗದಲ್ಲಿ ಪ್ಲಾಸ್ಟಿಕ್ & ಇತರೆ ತ್ಯಾಜ್ಯವನ್ನು ಸ್ವಚ್ಛಗೊಳಿಸುವ ಅಭಿಯಾನ ನಡೆಸಲಾಯಿತು.

23 ರಿಂದ 26 ಜನವರಿ 2021 ರವರೆಗೆ ಪಕ್ಷಿ ಸಮೀಕ್ಷೆ
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಪಕ್ಷಿ ಸಮೀಕ್ಷೆಯನ್ನು ಆಯೋಜಿಸಲಾಗಿದ್ದು, ಸಮೀಕ್ಷೆಯಲ್ಲಿ ನೊಂದಣಿಯಾದ 75 ಸ್ವಯಂ ಸೇವಕರು ಹಾಗೂ 23 ಅರಣ್ಯ ಕಾಲೇಜು ಪೊನ್ನಂಪೇಟೆ ವಿದ್ಯಾರ್ಥಿಗಳನ್ನು ಕ್ರಮವಾಗಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವಿವಿಧ ವಲಯಗಳಿಗೆ ನಿಯೋಜಿಸುವುದರೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ 843.96 ಚ.ಕಿ.ಮೀ ವ್ಯಾಪ್ತಿಯ 91 ಗಸ್ತುಗಳಲ್ಲಿ ಅರಣ್ಯ ಸಿಬ್ಬಂದಿಗಳನ್ನೊಳಗೊಂಡಂತೆ 111 ಜನ ಭಾಗವಹಿಸಿರುತ್ತಾರೆ. ಸದರಿ ಪಕ್ಷಿ ಸಮೀಕ್ಷೆಯಲ್ಲಿ 1300 ಕಿ.ಮೀ ಕಾಲ್ನಡಿಗೆ ಮೂಲಕ ಕೈಗೊಂಡು ನೆಲದ ಮೇಲೆ ವಾಸಿಸುವ, ಜಲಾಶಯ ಮತ್ತು ಜೌಗು ಪ್ರದೇಶದಲ್ಲಿ ವಾಸಿಸುವ ಹಾಗೂ ಅಂಬರದ ಪಕ್ಷಿಗಳ ಒಟ್ಟು 270 ಪಕ್ಷಿ ಪ್ರಭೇದಗಳನ್ನು ದಾಖಲಿಸಲಾಗಿದೆ.