ಅನುಸರಿಸಬೇಕಾದ ಮತ್ತು ನಿರ್ಬಂಧಿಸಲಾದ ಕ್ರಿಯೆಗಳು

ಅನುಸರಿಸಬೇಕಾದ ಕ್ರಿಯೆಗಳು

1.ಪ್ರತಿ ವಾಹನಗಳು ತಮಗೆ ಸೂಚಿಸಿದ ರಸ್ತೆಯಲ್ಲಿ ಮಾತ್ರ ಚಲಿಸಬೇಕು
2.ಪ್ರತಿ ವಾಹನ ಚಾಲಕರು 30 ಕಿ.ಮೀ/ ಗಂಟೆಗೆ ವೇಗದ ಮಿತಿಯನ್ನು ಪಾಲಿಸಬೇಕು
3.ಎರಡು ಚಲಿಸುತ್ತಿರುವ ಸಫಾರಿ ವಾಹನಗಳ ನಡುವಿನ ಅಂತರವನ್ನು 500 ಮೀ ಹಾಗೂ ವನ್ಯಜೀವಿ ವೀಕ್ಷಣೆ ಮಾಡುವಾಗ ಸ್ಥಗಿತ ವಾಹನಗಳ ನಡುವಿನ ಅಂತರ 50 ಮೀ ಕಾಯ್ದುಕೊಳ್ಳಬೇಕು.
4. ವಾಹನದಲ್ಲಿ ಚಲಿಸುವಾಗ ನಿಶಬ್ದದಿಂದ ಚಲಿಸಿ
5. ವನ್ಯಪ್ರಾಣಿಗಳ ಬಗ್ಗೆ ಚಾಲಕರು/ ನಿಸರ್ಗ ಸಲಹೆಗಾರರು ನೀಡುವ ಸಲಹೆಗಳನ್ನು ನಿರ್ಲಕ್ಷಿಸದೇ ಅವುಗಳನ್ನು ಅನುಸರಿಸಿ.

ನಿರ್ಬಂಧಿಸಲಾದ ಕ್ರಿಯೆಗಳು

1.ವನ್ಯ ಪ್ರಾಣಿಗಳಿಗೆ ಆಹಾರವನ್ನು ತಿನ್ನಿಸಬೇಡಿ
2. ಕಾಡಿನಲ್ಲಿ ಚಲಿಸುವಾಗ ವಾಹನದಿಂದ ಹೊರಗಡೆ ಇಳಿಯಬೇಡಿ.
3. ಕಾಡಿನಲ್ಲಿರುವ ಮಣ್ಣಿನ ರಸ್ತೆಯಲ್ಲಿ ಚಲಿಸಬೇಡಿ
4. ಕಾಡಿನ ರಸ್ತೆಯಲ್ಲಿ ಚಲಿಸುವಾಗ ವಾಹನದಲ್ಲಿ ಮೊಬೈಲ್‍ನ್ನು ಬಳಸಬೇಡಿ ಹಾಗೂ ಅತಿಯಾದ ಶಬ್ದವನ್ನು ಮಾಡಬೇಡಿ.
5. ಕಾಡಿನಲ್ಲಿ ಚಲಿಸುವಾಗ ವನ್ಯ ಪ್ರಾಣಿಗಳಿಗೆ ತೊಂದರೆ/ ಕೀಟಲೆ ಮಾಡಬಾರದು/ ಕೆಣಕಬಾರದು.
6. ಈ ಸಂರಕ್ಷಿತ ಪ್ರದೇಶದಿಂದ ಯಾವುದೇ ರೀತಿಯ ವಸ್ತುಗಳನ್ನು ತೆಗೆದುಕೊಂಡು ಹೋಗಬಾರದು